

ಹೊಸ ಬಾಟಲಿಯಲ್ಲಿ ಹಳೇ ಮದ್ಯ !
ಸುಮಾರು 45 ವರ್ಷಗಳ ಹಿಂದೆ…
ನಾವು ತುಂಬಾ ಚಿಕ್ಕವರಿದ್ದಾಗ…
ಇದ್ದಕ್ಕಿದ್ದಂತೆ ಒಂದು “ ರ್ರೊಂಯ್…” ಎಂಬ ಸದ್ದು ಕೇಳಿಸತೊಡಗಿತು ಎಂದರೆ ಮನೆಯ ಒಳಗಿರಲಿ ಅಥವಾ ಎಲ್ಲೇ ನಿಂತಿರಲಿ ಆ ಸದ್ದು ಹುಡುಕಿಕೊಂಡು ದಡಬಡನೆ ಓಡೋಡಿ ಬರುತ್ತಿದ್ದೆವು.
ಕೆಲವೇ ಕ್ಷಣಗಳಲ್ಲಿ ಒಂದು ಸೈಕಲ್ ನಮ್ಮ ಮುಂದೆ ಪಾಸ್ ಆಗುತ್ತಿತ್ತು. ಆ ಸೈಕಲ್ಲಿನ ಹಿಂಭಾಗದಲ್ಲಿ ಕ್ಯಾರಿಯರ್ ಎಂಬ ಜಾಗದಲ್ಲಿ ಒಂದು 4 X 3 ಅಳತೆಯ ತಡಿಕೆ ಕಟ್ಟಿರುತ್ತಿತ್ತು. ಅದರ ಮೇಲೆ ಆವತ್ತಿನ ಸಿನಿಮಾ ಯಾವುದು ಎಂಬ ಪೋಸ್ಟರ್ ಇರುತ್ತಿತ್ತು. ನಾವು ಹೋಗುತ್ತಿದ್ದೆವೋ ಬಿಡುತ್ತಿದ್ದೆವೋ ಆದರೆ ಥಿಯೇಟರ್ ನಲ್ಲಿ ಆವತ್ತು ಯಾವ ಸಿನಿಮಾ ಇದೆ ಎಂಬುದು ಚೆನ್ನಾಗಿ ಗೊತ್ತಾಗುತ್ತಿತ್ತು.
ಹಾಗೆ ತಡಿಕೆ ಕಟ್ಟಿದ ಸೈಕಲನ್ನು ಒಬ್ಬ ವ್ಯಕ್ತಿ ತುಳಿದುಕೊಂಡು ಹೋಗುತ್ತಿದ್ದ. ಸೈಕಲ್ ಮುಂದೆ ಉರುಳಿದಂತೆಲ್ಲ ಒಂದು ವಿಶಿಷ್ಟವಾದ “ ರ್ರೊಂಯ್…” ಎಂಬ ಒಂದು ಸದ್ದು ಕೇಳಿಸುತ್ತಿತ್ತು. ಹೆಚ್ಚೇನಿಲ್ಲ… ಚಕ್ರ ತಿರುಗುವ ವೇಗಕ್ಕೆ ತಕ್ಕ ಹಾಗೆ ಅದಕ್ಕೆ ಸೆಣಬಿನ ಹಗ್ಗ ಕಟ್ಟಿ ಆ ಹಗ್ಗಕ್ಕೆ ಒಂದು ಖಾಲಿ ಡಬ್ಬ ಕಟ್ಟಿರುತ್ತಿದ್ದರು. ಆ ಹಗ್ಗದ ವೈಬ್ರೇಶನ್ ಡಬ್ಬಕ್ಕೆ ತಾಗಿದಾಗಲೆಲ್ಲ ಆ ಸದ್ದು ಹುಟ್ಟುತ್ತಿತ್ತು.
ಇದು ಅರ್ಧ ಶತಮಾನಗಳಷ್ಟು ಹಿಂದಿನ ಒಂದು ಪ್ರಚಾರ ತಂತ್ರ.
ನಾವೀಗ… ಅದೇ ಪ್ರಚಾರ ತಂತ್ರವನ್ನು ಅದೇ ರೀತಿಯಲ್ಲಿಯೇ ಚಾಲ್ತಿಗೆ ತರುತ್ತಿದ್ದೇವೆ. ಹೊಸ ಬಾಟಲಿಯಲ್ಲಿ ಹಳೇ ಮದ್ಯ !
ಢಂಗೂರ'ದ ಸೃಜನಾತ್ಮಕ ಜಾಹೀರಾತು ತಂತ್ರದೊಂದಿಗೆ ನಿಮ್ಮ ವ್ಯಾಪಾರವನ್ನು ಉನ್ನತೀಕರಿಸಿ

ನಮ್ಮ ಇತ್ತೀಚಿನ ಸುದ್ದಿಗಳು
ನಿಮ್ಮ ಜಾಹೀರಾತಿಗಾಗಿ ಸೈಕಲ್ ಗಳನ್ನು ಕಾಯ್ದಿರಿಸಲು ಆಸಕ್ತಿ ಹೊಂದಿದ್ದೀರಾ?

ಡಂಗೂರ.. ಏಕೆ ಬೇಕು?
ನವೀನ ಮತ್ತು ವಿಶಿಷ್ಟ ವಿಧಾನ
ಢಂಗೂರದಲ್ಲಿ ನಾವು ಪ್ರಚಲಿತ ಆಧುನಿಕ ಮಾರ್ಕೆಟಿಂಗ್ ತಂತ್ರಗಳ ಜೊತೆಗೆ, ಹಳೆಯ ಮಧುರ ನೆನಪುಗಳನ್ನೂ ತರುವಂತೆ ಯೋಚಿಸಿದ್ದೇವೆ. ಈ ನಮ್ಮ ರೆಟ್ರೋ-ಪ್ರೇರಿತ ಜಾಹೀರಾತು ತಂತ್ರವು ಈ ಡಿಜಿಟಲ್ ಯುಗದಲ್ಲಿ ಎದ್ದು ಕಾಣುತ್ತದೆ. ನಿಮ್ಮ ಬ್ರ್ಯಾಂಡ್ ಅನ್ನು ಸ್ಮರಣೀಯವಾಗಿ ಮತ್ತು ಆಕರ್ಷಕವಾಗಿ ಮಾಡುತ್ತದೆ. ನೋಡುಗರಿಗೆ ತಾಜಾ ಎನಿಸುವಂತೆ, ಉತ್ತೇಜಕ ರೀತಿಯಲ್ಲಿ ಆಕರ್ಷಿಸುವ, ಕಾಲದ ಪರೀಕ್ಷೆಯಲ್ಲಿ ಗೆದ್ದಿರುವ ವಿಧಾನವನ್ನು ನಾವು ಮರಳಿ ಪರಿಚಯಿಸುತ್ತಿದ್ದೇವೆ.
ಪರಿಸರ ಸ್ನೇಹಿ ಮತ್ತು ಸಮರ್ಥನೀಯ
ಪರಿಸರ ಸಂರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ನಮ್ಮ ಜಾಹೀರಾತು ವಿಧಾನವು ಪರಿಸರ ಸ್ನೇಹಿಯಾಗಿದೆ. ಕನಿಷ್ಠ ಸಂಪನ್ಮೂಲಗಳನ್ನು ಬಳಸಿ ಗರಿಷ್ಠ ಪರಿಣಾಮ ಬೀರುವಂತೆ ವಿನ್ಯಾಸಗೊಳಿಸಲಾಗಿದೆ. ಢಂಗೂರವನ್ನು ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ಬ್ರಾಂಡ್ ಅನ್ನು ಅತಿ ಹೆಚ್ಚು ಜನರಿಗೆ ತಲುಪುವಂತೆ ಮಾಡುತ್ತೀರಿ. ಜೊತೆಗೆ ಈ ಹಸಿರುಗ್ರಹಕ್ಕೆ ನಿಮ್ಮದೂ ಕೊಡುಗೆ ನೀಡುತ್ತೀರಿ.
ಮಿತ ವೆಚ್ಚದ ಪರಿಣಾಮಕಾರಿ ಪರಿಹಾರಗಳು
ಹಣದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನಾವು ಅರಿತಿದ್ದೇವೆ. ಹಾಗಾಗಿಯೇ, ನಮ್ಮ ಜಾಹೀರಾತು ತಂತ್ರವು ಹೆಚ್ಚಾಗಿಯೇ ಮಿತವೆಚ್ಚ ಮತ್ತು ಪರಿಣಾಮಕಾರಿಯಾಗಿದೆ. ಇದು ನಿಮ್ಮ ಬ್ಯಾಂಕ್ ಖಾತೆಗೆ ಭಾರವಾಗದಂತೆ ಹೆಚ್ಚು ಜನರನ್ನು ತಲುಪಲು ಸಹಕರಿಸುತ್ತದೆ. ಪ್ರಸ್ತುತ ಇರುವ ಸಾಂಪ್ರದಾಯಿಕ ಜಾಹೀರಾತು ವಿಧಾನಗಳಿಗೆ ತಗಲುವ ವೆಚ್ಚದ ಒಂದು ಭಾಗದಲ್ಲಿ ನಾವು ಅತ್ಯಂತ ಪರಿಣಾಮಕಾರಿ ಫಲಿತಾಂಶಗಳನ್ನು ಒದಗಿಸುತ್ತೇವೆ.
ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಗೋಚರತೆ
ನಮ್ಮ ವಿಧಾನದ ಪ್ರಕಾರ ಕಾರ್ಯನಿರತ ಮತ್ತು ಜನನಿಬಿಡ ಸ್ಥಳಗಳಲ್ಲಿ ನಿಮ್ಮ ಜಾಹೀರಾತು ಸಂದೇಶವನ್ನು ಎಲ್ಲರೂ ನೋಡುವಂತಾಗುತ್ತದೆ ಮತ್ತು ಕೇಳಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತೇವೆ. ನಾವು ನಿಮ್ಮ ಜಾಹೀರಾತುಗಳನ್ನು ಅತಿ ಹೆಚ್ಚು ಹೆಚ್ಚು ಜನರ ಗಮನ ಸೆಳೆಯುವಂತಹ ಸ್ಥಳದಲ್ಲಿ ಪ್ರದರ್ಶಿಸುತ್ತೇವೆ. ಇದು ನಿಮ್ಮ ಬ್ರ್ಯಾಂಡ್ ಎದ್ದು ಕಾಣಲು ಮತ್ತು ಸಂಭಾವ್ಯ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.
ನಮ್ಮ ಹೆಜ್ಜೆ ಗುರುತುಗಳು, ಗೆದ್ದ ದಾಖಲೆಗಳು
ಢಂಗೂರ ಅಭಿಯಾನವು ಅತ್ಯಂತ ಯಶಸ್ವಿಯಾಗಿರುವ ದಾಖಲೆಯನ್ನು ಹೊಂದಿದೆ. ನಮ್ಮ ಗ್ರಾಹಕರು ಬ್ರಾಂಡ್ ಜಾಗೃತಿ ಮತ್ತು ಗ್ರಾಹಕರ ಒಡನಾಟ ಎರಡಲ್ಲಿಯೂ ಗಮನಾರ್ಹ ಹೆಚ್ಚಳ ಕಂಡಿದ್ದಾರೆ. ನಿರೀಕ್ಷೆಗಳನ್ನು ಮೀರಿದ ಫಲಿತಾಂಶಗಳನ್ನು ನೀಡಿರುವುದಕ್ಕಾಗಿ ನಾವು ಹೆಮ್ಮೆ ಪಡುತ್ತೇವೆ.
ವೈಯಕ್ತಿಕಗೊಳಿಸಿದ ಸೇವಾ ಮನೋಭಾವ
ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ತಕ್ಕಂತೆ ನಮ್ಮ ವಿಧಾನವನ್ನು ಹೊಂದಿಸಲು, ನಾವು ನಮ್ಮ ಪ್ರತಿಯೊಬ್ಬ ಗ್ರಾಹಕರೊಂದಿಗೂ ನಿಕಟವಾಗಿ ಕೆಲಸ ಮಾಡುತ್ತೇವೆ. ಢಂಗೂರದಲ್ಲಿನ ನಿಮ್ಮ ಯಶಸ್ಸು ನಮ್ಮ ಯಶಸ್ಸು ಸಹಾ. ನಿಮ್ಮ ಬ್ರ್ಯಾಂಡ್ ಪ್ರಕಾಶಿಸುವ ಹಾಗೆ ವೈಯುಕ್ತೀಕರಿಸಿದ ವೃತ್ತಿಪರ ಸೇವೆಯನ್ನು ಒದಗಿಸಲು ನಾವು ನಮ್ಮನ್ನು ಸಮರ್ಪಿಸಿಕೊಂಡಿರುತ್ತೇವೆ.
ನಮ್ಮ ಪ್ರಶಂಸಾಪತ್ರಗಳು
ನಮ್ಮ ಗ್ರಾಹಕರಿಂದ ಮಾತುಗಳು

Ramesh Kumar, Manager

Anjali Desai, HR

Suresh Rao
Stay always in touch
We cater to the needs of diverse industries across verticals. We are a team of devoted souls.