
ನಮ್ಮ ಪ್ರಯತ್ನ
ಢಂಗೂರ ಎಂಬ ಈ ನಮ್ಮ ಸಂಸ್ಥೆ ಸೈಕಲ್ ಬಳಸಿ ಪ್ರಚಾರ ಮಾಡುವ ತಂತ್ರವನ್ನು ಮತ್ತೆ ಬಳಸಿಕೊಳ್ಳುತ್ತಿದೆ. ಈ ಸಂಸ್ಥೆಯು ಸಿನಿಘಮ ಮಾತೃಸಂಸ್ಥೆಯ ಅಂಗಸಂಸ್ಥೆಯಾಗಿದೆ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ಪ್ರಚಾರಕ್ಕೆ ನಾನಾ ರೀತಿಯ ತಂತ್ರಗಳು ಇವೆ. ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣಗಳು… ಇದೆಲ್ಲವೂ ನಿರ್ದಿಷ್ಟ ಗುರಿಯನ್ನು ಮತ್ತು ಜನಸಾಮಾನ್ಯರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಜನಸಾಮಾನ್ಯರನ್ನು ಆಕರ್ಷಿಸಲು ಇದು ಸೂಕ್ತವಾದ ಯೋಜನೆಯಾಗಿರುತ್ತದೆ.
ನಿರ್ದಿಷ್ಟ ಗುರಿಗಳನ್ನು ಕೇಂದ್ರೀಕರಿಸಿ ಈ ಜಾಹೀರಾತು ತಂತ್ರ ಬಳಸಿದರೆ ಇದು ಅತಿ ಹೆಚ್ಚು ಪರಿಣಾಮಕಾರಿಯಾಗಿ ಫಲ ನೀಡುತ್ತದೆ. ಮುಖ್ಯವಾಗಿ ಈ ವಿಧಾನದಲ್ಲಿ ಖರ್ಚು ವೆಚ್ಚಗಳು ಕಮ್ಮಿ ಇರುತ್ತವೆ. ಆದರೆ ಹೆಚ್ಚು ಜನದಟ್ಟಣೆಯ ಸ್ಥಳಗಳಲ್ಲಿ ಈ ಬಗೆಯ ಜಾಹೀರಾತು ಪ್ರದರ್ಶನದಿಂದ ಹೆಚ್ಚು ಜನರ ಗಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾಗುತ್ತದೆ.
ಸಂಸ್ಥೆಯ ಪ್ರತಿ ವ್ಯಕ್ತಿಯು ಪ್ರತಿದಿನ ನಿರ್ದಿಷ್ಟ ಗಂಟೆಗಳಲ್ಲಿ, ಪ್ರತಿ ಸೈಕಲ್ ಅನ್ನು ನಿರ್ದಿಷ್ಟ ಕಿಲೋಮೀಟರ್ಗಳಷ್ಟು ಸುತ್ತುತ್ತಾನೆ. ಸೈಕಲ್ ಚಲಿಸುವಾಗ ಮೂಡುವ ಸದ್ದು ದಾರಿಹೋಕರನ್ನು ಆಕರ್ಷಿಸುತ್ತದೆ ಮತ್ತು ಜನರ ಕಣ್ಣಿಗೆ ನಾವು ಏನು ಹೇಳಬೇಕೆಂದಿದ್ದೆವೋ ಅದನ್ನು ತಲುಪಿಸುತ್ತದೆ. ಹಳಬರು ಇತಿಹಾಸ ನೆನಪಿಸಿಕೊಳ್ಳುತ್ತಾರೆ. ಹೊಸಬರು ಕುತೂಹಲದಿಂದ ಗಮನಿಸುತ್ತಾರೆ. ಒಟ್ಟಾರೆಯಾಗಿ ಜಾಹೀರಾತು ತಂತ್ರ ಯಶಸ್ವಿಯಾಗುತ್ತದೆ.